Saksham Eye Donation Awareness Essay Competition Prize Distribution Program in JGRVK – Ramamurthy Nagar

Bengaluru, Nov. 12: On October 19, the ‘Saksham’ organized an essay competition for students of classes 8, 9 and 10 on vision awareness herein Jaigopal Garodia Rashtrotthana Vidya Kendra – Ramamurthy Nagar. Its prize distribution ceremony was held on 12 November 2024 herein Jaigopal Garodia Rashtrotthana Vidya Kendra – Ramamurthy Nagar. Dr. Keshav Kumar, President of Saksham Karnataka South Province, graced the program. Sri Nagaraj, Regional Secretary of Sakham, was also present. The teacher, Sri Prakash, gave a brief overview of the event and announced the winners. The chief guest, Dr. Keshav Kumar emphasized the importance of eye donation. Sri Dwarkanath, Vice President of Rashtrotthana, spoke about eye donation and encouraged children to take the initiative to donate the eyes.A total of 600 people attended the program.

ಬೆಂಗಳೂರು, ನ. 12: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಅಕ್ಟೋಬರ್ 19ರಂದು ಸಾಕ್ಷ್ಯಂ ಸಂಸ್ಥೆಯು ದೃಷ್ಟಿದಾನ ಜಾಗೃತಿ ಕುರಿತು 8, 9 ಮತ್ತು 10ನೇ ವರ್ಗದ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿತ್ತು. ಅದರ ಬಹುಮಾನ ವಿತರಣಾ ಸಮಾರಂಭವು ದಿ. 12. ನವೆಂಬರ್ 2024ರಂದು ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸಾಕ್ಷ್ಯಂ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷರಾದ ಡಾ. ಕೇಶವ ಕುಮಾರ್ ಅವರು ಆಗಮಿಸಿದ್ದರು. ಸಾಕ್ಷ್ಯಂನ ಪ್ರಾದೇಶಿಕ ಕಾರ್ಯದರ್ಶಿಗಳಾದ ಶ್ರೀ ನಾಗರಾಜ್ ಅವರು ಉಪಸ್ಥಿತರಿದ್ದರು.ಶಿಕ್ಷಕರಾದ ಶ್ರೀ ಪ್ರಕಾಶ್ ಅವರು ಕಾರ್ಯಕ್ರಮದ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು ಮತ್ತು ವಿಜೇತರ ಹೆಸರನ್ನು ಪ್ರಕಟಿಸಿದರು. ಅತಿಥಿಗಳಾದ ಶ್ರೀ ಕೇಶವ ಕುಮಾರ್ ಅವರು ದೃಷ್ಟಿದಾನದ ಮಹತ್ತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ರಾಷ್ಟ್ರೋತ್ಥಾನದ ಉಪಾದ್ಯಕ್ಷರಾದ ಶ್ರೀ ದ್ವಾರಕನಾಥ್ ಅವರು ದೃಷ್ಟಿದಾನದ ಕುರಿತು ಮಾತನಾಡುತ್ತ, ಕಣ್ಣಿನ ದಾನದ ಬಗ್ಗೆ ವಿದ್ಯಾರ್ಥಿಗಳು ಉತ್ಸುಕರಾಗಬೇಕೆಂದು ಉತ್ತೇಜಿಸಿದರು.ಕಾರ್ಯಕ್ರಮದಲ್ಲಿ ಸುಮಾರು 600 ಜನರು ಭಾಗವಹಿಸಿದ್ದರು.

Scroll to Top