Bengaluru, June 21: The 11th International Yoga Day was celebrated herein Jaigopal Garodia Rashtrotthana Vidya Kendra – Ramamurthy Nagar.
50 students performed yoga in front of the Zudio and Khadi Bhandar in Ramamurthy Nagar. Kumari Sivagami and Kumar Atharv spoke about the benefits of yoga in daily life.
Sri Madhav Jois, Rashtrotthana Yoga Teacher and Cloud Engineer at Oracle India, was the chief guest and spoke about the importance of yoga in daily life.
On this occasion, Vijetha Venugopal, a student of class 10, who won a bronze medal in the National Yoga Olympiad 2025 held in Kanyakumari, Tamil Nadu, was felicitated. She represented Vidya Bharati.
Students, staff and parents of Mathrubharti participated in the yoga session.
ಬೆಂಗಳೂರು, ಜೂ. 21: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು.
50 ವಿದ್ಯಾರ್ಥಿಗಳು ರಾಮಮೂರ್ತಿ ನಗರದ ಝುಡಿಯೋ ಮತ್ತು ಖಾದಿ ಭಂಡಾರದ ಎದುರು ಯೋಗವನ್ನು ಪ್ರದರ್ಶಿಸಿದರು. ಕುಮಾರಿ ಶಿವಗಾಮಿ ಮತ್ತು ಕುಮಾರ್ ಅಥರ್ವ್ ದೈನಂದಿನ ಜೀವನದಲ್ಲಿ ಯೋಗದ ಲಾಭದ ಕುರಿತು ಮಾತಾಡಿದರು.
ರಾಷ್ಟ್ರೋತ್ಥಾನ ಪರಿಷತ್ ಯೋಗ ಶಿಕ್ಷಕರು ಹಾಗೂ ಒರಾಕಲ್ ಇಂಡಿಯಾದ ಚ್ಲೌಡ್ ಇಂಜಿನಿಯರ್ ಆಗಿರುವ ಶ್ರೀ ಮಾಧವ ಜೋಯಿಸ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೈನಂದಿನ ಜೀವನದಲ್ಲಿ ಯೋಗದ ಮಹತ್ತ್ವದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ 10ನೇ ತರಗತಿಯ ವಿದ್ಯಾರ್ಥಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದ ರಾಷ್ಟ್ರೀಯ ಯೋಗ ಒಲಂಪಿಯಾಡ್ 2025ರಲ್ಲಿ ಕಂಚಿನ ಪದಕ ಪಡೆದ ವಿಜೇತಾ ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಇವರು ವಿದ್ಯಾಭಾರತಿಯನ್ನು ಪ್ರತಿನಿಧಿಸಿದ್ದರು.
ವಿದ್ಯಾರ್ಥಿಗಳು, ಸಿಬ್ಬಂದಿವರ್ಗ ಹಾಗೂ ಮಾತೃಭಾರತಿಯ ಪಾಲಕರು ಯೋಗ ಅವಧಿಯಲ್ಲಿ ಭಾಗವಹಿಸಿದ್ದರು.