Dengue Awareness Campaign by JGRVK- Ramamurthy Nagar

Bengaluru, July 13: The NCC Cadets of Jaigopal Garodia Rashtrotthana Vidya Kendra – Ramamurthy Nagar, participated in the ‘Dengue Awareness Program’ organized by Karnataka Girls NCC Battalion herein Satya Nagar and Ambedkar Nagar. Speeches, Mass Singing, and Street Drama were utilized to promote public awareness of dengue control. The program was witnessed by Government School Students, Asha Workers, Health Centre Members, and General Public. Awareness was raised about mosquito control and wearing clothes that fully cover the body. A Rally and Shramdan were also carried out in the program. Mosquito control medicine and mosquito coils were distributed.

ಬೆಂಗಳೂರು, ಜುಲೈ 13: ಕರ್ನಾಟಕ ಎನ್‍ಸಿಸಿ ಬಾಲಕಿಯರ ಬೆಟಾಲಿಯನ್‍ನವರು ಬೆಂಗಳೂರಿನ ಸತ್ಯನಗರ ಹಾಗೂ ಅಂಬೇಡ್ಕರ್ ನಗರದಲ್ಲಿ ಆಯೋಜಿಸಿದ್ದ ‘ಡೇಂಘೆ ಜಾಗೃತಿ’ ಕಾರ್ಯಕ್ರಮದಲ್ಲಿ ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ಕೆಡೆಟ್‍ಗಳು ಪಾಲ್ಗೊಂಡಿದ್ದರು. ಭಾಷಣ, ಸಾಮೂಹಿಕ ಗೀತೆ ಮತ್ತು ಬೀದಿ ನಾಟಕದ ಮೂಲಕ ಡೆಂಗ್ಯೂ ನಿಯಂತ್ರಣದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಸರ್ಕಾರೀ ಶಾಲಾ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಸೊಳ್ಳೆ ನಿಯಂತ್ರಣ ಹಾಗೂ ಮೈತುಂಬ ಬಟ್ಟೆ ಧರಿಸುವ ಕುರಿತು ಅರಿವು ಮೂಡಿಸಲಾಯಿತು. ರ್ಯಾಲಿ ಹಾಗೂ ಶ್ರಮದಾನವನ್ನೂ ಮಾಡಲಾಯಿತು.ಎನ್‌ಸಿಸಿ ಸಂಯೋಜಕರಾದ ಶ್ರೀಮತಿ ಪಲ್ಲವಿ, ಸೇವಾ ಪ್ರಮುಖರಾದ ಶ್ರೀಮತಿ ಲೀಲಾವತಿ, ಶಿಕ್ಷಕರಾದ ಶ್ರೀಮತಿ ಮಂಗಮ್ಮ, ಶ್ರೀಮತಿ ಲಕ್ಷ್ಮಿ, ಸೇವಾ ಸಹಾಯಕಿ ಶ್ರೀಮತಿ ಮಹೇಶ್ವರಿಯವರು ಈ ಸೇವಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.ಸೊಳ್ಳೆ ನಿಯಂತ್ರಿಸುವ ಔಷಧಿ, ಸೊಳ್ಳೆಬತ್ತಿಯನ್ನು ವಿತರಣೆ ಮಾಡಲಾಯಿತು.

Scroll to Top