Inaugural Ceremony of Matrubharati in JGRVK Ramamurthy Nagar

Bengaluru, June 7: Jaigopal Garodia Rashtrotthana Vidya Kendra – The
inaugural ceremony of Matrubharati 2025-26 was organized herein
Ramamurthy Nagar. As part of the 300th birth centenary of Ahalyabai Holkar, all mothers took a pledge to serve the society and uplift the needy.
Information was shared about RP@60, the annual plan for 2025-26 and
the activities of 2024-25. The Principal, Smt. Prema Surender, spoke about the purpose behind the various projects of self-care, service spirit and Rashtrotthana. Bookmarks created by the students were given as a token of love.The sessions concluded after the interaction.

ಬೆಂಗಳೂರು, ಜೂ. 7: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಮಾತೃಭಾರತಿ 2025-26 ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಅಹಲ್ಯಾಭಾಯಿ ಹೋಳ್ಕರ್‌ ಅವರ 300ನೇ ಜನ್ಮಶತಮಾನೋತ್ಸವದ ಅಂಗವಾಗಿ ಎಲ್ಲ ಮಾತೆಯರು ಸಮಾಜಕ್ಕೆ ಸೇವೆ ಸಲ್ಲಿಸುವ ಹಾಗೂ ದುರ್ಬಲರನ್ನು ಮೇಲೇತ್ತುವ ಕಾರ್ಯಕ್ಕೆ ಕೈಜೋಡಿಸುವುದಾಗಿ ಪ್ರತಿಜ್ಞೆ ಮಾಡಿದರು. ಆರ್.ಪಿ@60 ಕುರಿತು, 2025-26ರ ವಾರ್ಷಿಕ ಯೋಜನೆಯ ಬಗ್ಗೆ ಹಾಗೂ 2024-25ರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಪ್ರಧಾನಾಚಾರ್ಯರಾದ ಶ್ರೀಮತಿ ಪ್ರೇಮಾ ಸುರೇಂದರ್‌ ಅವರು ಸ್ವ-ಕಾಳಜಿ, ಸೇವಾಭಾವ ಮತ್ತು ರಾಷ್ಟ್ರೋತ್ಥಾನದ ಬೇರೆಬೇರೆ ಪ್ರಕಲ್ಪಗಳ ಹಿಂದಿರುವ ಉದ್ದೇಶದ ಕುರಿತು ತಿಳಿಸಿದರು. ವಿದ್ಯಾರ್ಥಿಗಳು ರಚಿಸಿದ ಬುಕ್‌ಮಾರ್ಕ್‌ಗಳನ್ನು ಪ್ರೀತಿಯ ಸಂಕೇತವಾಗಿ ನೀಡಲಾಯಿತು. ಅವಧಿಗಳು ಸಂವಾದದ ನಂತರ ಮುಕ್ತಾಯವಾಯಿತು.

Scroll to Top