Rashtrotsava Celebration in JGRVK – Ramamurthy Nagar

Bengaluru, Dec. 6: Rashtrotsava was organized for the students of 7 to 10 herein Jaigopal Garodia Rashtrotthana Vidya Kendra – Ramamurthy Nagar on the theme ‘Rudraksha, a symbol of devotion and spirituality’. Former Bengaluru City Police Commissioner Sri Jyotiprakash Mirji graced the program. The program was inaugurated by Sri Maheshwaraiah, Administrator of Rashtrotthana Schools. The introductory remarks were delivered by Sri Sridhar K.S., Vyavashta Pramukh of the Southern Province. Cultural programs were organized in the form of Harikatha. The narration began with depictions of the creation of the Universe. It turned into real depictions of all the Jyotirlingas of India. The students brought the stories to life through their remarkable performances.

ಬೆಂಗಳೂರು, ಡಿ. 6: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ 7ರಿಂದ 10ನೇ ತರಗತಿಯ ಮಕ್ಕಳಿಗಾಗಿ ‘ರುದ್ರಾಕ್ಷ, ಭಕ್ತಿ ಮತ್ತು ಅಧ್ಯಾತ್ಮದ ಸಂಕೇತ’ ಎಂಬ ವಿಷಯಾಧಾರಿತ ರಾಷ್ಟ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಬೆಂಗಳೂರು ನಗರದ ಮಾಜಿ ಪೊಲೀಸ್ ಕಮಿಷನರ್ ಶ್ರೀ ಜ್ಯೋತಿಪ್ರಕಾಶ್ ಮಿರ್ಜಿ ಅವರು ಆಗಮಿಸಿದ್ದರು. ಕಾರ್ಯಕ್ರಮಕ್ಕೆ ರಾಷ್ಟ್ರೋತ್ಥಾನ ಶಾಲೆಗಳ ಆಡಳಿತಾಧಿಕಾರಿಗಳಾದ ಶ್ರೀ ಮಹೇಶ್ವರಯ್ಯ ಅವರು ಚಾಲನೆ ನೀಡಿದರು. ಪ್ರಾಸ್ತಾವಿಕ ಮಾತುಗಳನ್ನು ದಕ್ಷಿಣಪ್ರಾಂತದ ಸಹ ವ್ಯವಸ್ಥಾ ಪ್ರಮುಖರಾದ ಶ್ರೀ ಶ್ರೀಧರ್ ಕೆ.ಎಸ್. ಅವರು ನಡೆಸಿಕೊಟ್ಟರು. ಹರಿಕಥೆಯ ರೂಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಬ್ರಹ್ಮಾಂಡದ ಸೃಷ್ಟಿಯ ಚಿತ್ರಣಗಳೊಂದಿಗೆ ನಿರೂಪಣೆಯು ಆರಂಭವಾಯಿತು. ಭಾರತದ ಎಲ್ಲ ಜ್ಯೋತಿರ್ಲಿಂಗಗಳ ನಿಜ ಚಿತ್ರಣಗಳಾಗಿ ಪರಿವರ್ತನೆಯಾಯಿತು. ವಿದ್ಯಾರ್ಥಿಗಳು ತಮ್ಮ ಗಮನಾರ್ಹ ಪ್ರದರ್ಶನದ ಮೂಲಕ ಕಥೆಗಳಿಗೆ ಜೀವ ತುಂಬಿದರು.

Scroll to Top