Sri Rama Navami Celebration in JGRVK – Ramamurthy Nagar

Bengaluru, Apr. 5: Sri Ram Navami was celebrated herein Jaigopal Garodia Rashtrotthana Vidya Kendra – Ramamurthy Nagar. The school was decorated with garlands and the Principal, Smt. Gowri Senthil, performed pujas to the portrait of Sri Rama. The students performed bhajans, dances and sang devotional songs of Sri Rama in the school premises. Later, the students performed bhajans and danced on the main streets near the school and reached the Sri Kodandaramaswamy temple and received the blessings of Sri Rama. After offering Rama, they had Panaka, Buttermilk and Kosambari. Rama Bhajan at Home: The students and teachers of the school went to the houses of their parents and performed bhajans.

ಬೆಂಗಳೂರು, ಏ. 5: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಶ್ರೀ ರಾಮನವಮಿಯನ್ನು ಆಚರಿಸಲಾಯಿತು.  ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಶ್ರೀ ರಾಮನ ಭಾವಚಿತ್ರಕ್ಕೆ ಪ್ರಧಾನಾಚಾರ್ಯರಾದ ಶ್ರೀಮತಿ ಗೌರಿ ಸೆಂಥಿಲ್ ಅವರು ಪೂಜಾಕಾರ್ಯಗಳನ್ನು ನೆರವೇರಿಸಿದರು. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಭಜನೆ, ನೃತ್ಯ ಹಾಗೂ ಶ್ರೀರಾಮನ ಭಕ್ತಿ ಗೀತೆಯನ್ನು ಹಾಡಿದ ವಿದ್ಯಾರ್ಥಿಗಳು ನಂತರ ಶಾಲೆಯ ನೆರೆಯ ಪ್ರಮುಖ ಬೀದಿಗಳಲ್ಲಿ ಭಜನೆ ಮಾಡುತ್ತಾ ನರ್ತಿಸುತ್ತ ಶ್ರೀ ಕೋದಂಡರಾಮಸ್ವಾಮಿ ದೇವಾಲಯಕ್ಕೆ ತಲುಪಿ ಶ್ರೀರಾಮನ ಕೃಪಾಶೀರ್ವಾದಗಳನ್ನು ಪಡೆದರು. ರಾಮನ ನೈವೇದ್ಯ ನಂತರ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ಸವಿದರು. ಮನೆ ಮನೆಯಲ್ಲಿ ರಾಮಭಜನೆ: ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳು ಪೋಷಕರ ಮನೆಗಳಿಗೆ ತೆರಳಿ ಭಜನಾ ಕಾರ್ಯವನ್ನು ನಡೆಸಿಕೊಟ್ಟರು.

Scroll to Top