Bengaluru, June 21: The 10th International Day of Yoga was celebrated in Jaigopal Garodia Rashtrothana Vidya Kendra – Ramamurthy Nagar. Dr. Sindhu, Samvit Research Assistant, Ayurvedic Doctor, was the guest of honor. School teachers and students performed various asanas. Students gave speech on the significance of Yoga Day. It was special that the team of Matru Bharati also participated in the yoga day. A week-long program was organized for the female staff under the theme “Yoga for Women Empowerment”.
ಬೆಂಗಳೂರು, ಜೂನ್ 21 : ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ 10ನೇ ಅಂತರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ಡಾ. ಸಿಂಧೂ, ಸಂವಿತ್ ಸಂಶೋಧನಾ ಸಹಾಯಕರು, ಆಯುರ್ವೇದ ವೈದ್ಯೆ, ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿವಿಧ ಆಸನಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಯೋಗದಿನದ ಮಹತ್ತ್ವದ ಕುರಿತು ಮಾತನಾಡಿದರು. ಮಾತೃಭಾರತಿ ತಂಡದವರೂ ಯೋಗದಿನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. “ಮಹಿಳಾ ಸಬಲೀಕರಣಕ್ಕೆ ಯೋಗ” ಥೀಮ್ ಅನುಗುಣವಾಗಿ ಮಹಿಳಾ ಸಿಬ್ಬಂದಿಗಳಿಗೆ ವಾರಪೂರ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅತಿಥಿಗಳಾದ ಡಾ. ಸಿಂಧು ಅವರು ಯೋಗದ ಕುರಿತು ಕಿರುಪದ್ಯವನ್ನು ವಾಚಿಸಿದರು ಹಾಗೂ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.