11-02-2023 Mathru Bharati Convention of Vidya Bharati @ JGRVK Ramamurthy Nagar

Bengaluru, Feb. 11: Vidya Bharati’s Bengaluru District Level Mathru Bharati Convention was organised herein JGRVK – Ramamurthy Nagar School.

ವಿದ್ಯಾಭಾರತಿಯ ಮಾತೃ ಭಾರತಿ ಸಮಾವೇಶ – ಜೆ.ಜಿ.ಆರ್.ವಿ.ಕೆ. – ರಾಮಮೂರ್ತಿ ನಗರದಲ್ಲಿ
ಬೆಂಗಳೂರು, ಫೆ. 11: ವಿದ್ಯಾಭಾರತಿ ಬೆಂಗಳೂರು ನಗರ ಜಿಲ್ಲಾಮಟ್ಟದ ಮಾತೃ ಭಾರತಿ ಸಮಾವೇಶವನ್ನು ಜೆ.ಜಿ.ಆರ್.ವಿ.ಕೆ. – ರಾಮಮೂರ್ತಿ ನಗರ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಥಣಿಸಂದ್ರ ಶಾಲೆಯಿಂದ 45 ಮಾತೆಯರು ಪಾಲ್ಗೊಂಡಿದ್ದರು. ರಾಮಮೂರ್ತಿ ನಗರದ ಮುಖ್ಯರಸ್ತೆಯಲ್ಲಿ ಶೋಭಾಯಾತ್ರೆ ಪ್ರಾರಂಭಗೊಂಡು, ಶಾಲೆಯ ಘೋಷ್ ತಂಡದ ಘೋಷ್ ವಾದನದೊಂದಿಗೆ ಮಾತೆಯರಿಗೆ ಸ್ವಾಗತ ಕೋರಲಾಯಿತು. ಸಮಾವೇಶದಲ್ಲಿ ಹಲವಾರು ಕಾರ್ಯಕ್ರಮಗಳೊಂದಿಗೆ ಮಾತೆಯರಿಗಾಗಿ ಮಾತೃ ಭೋಜನವನ್ನು ಏರ್ಪಡಿಸಲಾಗಿತ್ತು.

Scroll to Top