Bengaluru, Aug 24: Jaigopal Garodi Rashtrotthana Vidya Kendra – Ramamurthy Nagar organized a Blood Donation Camp in collaboration with Rashtrotthana Blood Centre. A blood donation camp was launched by offering floral tributes to the portrait of Mother India. A total of 281 units of blood were collected.On the same day, a Parents Meeting was also held and a bookstore was opened on behalf of Rashtrotthatha Sahitya and Literature lovers bought around Rs. 83, 614/- books.On the same day Rashtrotthana Yoga Centre shared information about the importance of yoga and the yoga classes held in the school to all the parents present.
ಬೆಂಗಳೂರು, ಆಗಸ್ಟ್ 24: ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ರಾಮಮೂರ್ತಿ ನಗರದಲ್ಲಿ ರಾಷ್ಟ್ರೋತ್ಥಾನ ರಕ್ತಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆಯನ್ನು ನೀಡಲಾಯಿತು. ಒಟ್ಟು 281 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಇದೇ ದಿನ ಪೋಷಕರ ಸಭೆಯೂ ನಡೆದು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಸಾರದ ವತಿಯಿಂದ ಪುಸ್ತಕ ಮಳಿಗೆಯನ್ನು ತೆರೆಯಲಾಗಿದ್ದು, ರೂ. 83, 614/- ನಷ್ಟು ಪುಸ್ತಕಗಳನ್ನು ಸಾಹಿತ್ಯಸಕ್ತರು ಕೊಂಡುಕೊಂಡರು.ಇದೇ ದಿನ ರಾಷ್ಟ್ರೋತ್ಥಾನ ಯೋಗ ಕೇಂದ್ರದವರು ಆಗಮಿಸಿದ್ದ ಎಲ್ಲ ಪೋಷಕರಿಗೂ ಯೋಗದ ಮಹತ್ತ್ವ ಹಾಗೂ ನಮ್ಮ ಶಾಲೆಯಲ್ಲಿ ನಡೆಯುತ್ತಿರುವ ಯೋಗ ತರಗತಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.