Bengaluru, Aug 3: A Rangoli Competition was organized for the mothers of Matru Bharati Group on the occasion of Varamahalakshmi festival herein Jai Gopal Garodia Rashttrothana Vidya Kendra – Ramamurthy Nagar under Seva Project.A total of 60 mothers were participated in this competition and created a festive atmosphere. Smt. Impa, a member of the Matru Bharati Group, explained the importance of Rangoli.The prizes will be distributed to the winning team on Aug 15, Independence Day.
ಬೆಂಗಳೂರು, ಆಗಸ್ಟ್ 3: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದ ಸೇವಾ ಪ್ರಕಲ್ಪದ ವತಿಯಿಂದ ಮಾತೃಭಾರತಿ ಗುಂಪಿನ ಮಾತೆಯರಿಗೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಒಟ್ಟು 60 ಮಾತೆಯರು ಇದರಲ್ಲಿ ಭಾಗವಹಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದರು.ಮಾತೃಭಾರತೀ ಗುಂಪಿನ ಸದಸ್ಯರಾದ ಶ್ರೀಮತಿ ಇಂಪಾ ಅವರು ರಂಗೋಲಿಯ ಮಹತ್ವವನ್ನು ತಿಳಿಸಿದರು. ವಿಜೇತ ತಂಡಕ್ಕೆ ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬಹುಮಾನವನ್ನು ವಿತರಿಸಲಾಗುವುದು.