Teacher Capacity Building Camp in JGRVK – Ramamurthy Nagar

Teacher Capacity Building Camp in JGRVK – Ramamurthy Nagar Bengaluru, Oct 14-15: Jayagopal Garodia Rashtrotthana Vidya Kendra – Ramamurthy Nagar successfully conducted a two-day ‘Teacher Capacity Building Camp’.
Day 1: Smt. Baby Ranikar of Rashtrotthana ‘Sadhana’ project gave an energetic presentation on the importance of group learning. Later Sri Raghavendra Patil spoke about the use of technology in learning. Also, thinker and writer Sri Ranka Ranade shed light on the life achievements of Rashtra Purusha Sardar Vallabhbhai Patel. Later, Principal Smt. Gauri Sandhil and Vice-Principal Smt. Annette and Sri. Karthik Krishnan informed to the various groups of the school about the professionalism and culture of Rashtrotthana. In the final period of the day, Pramukh of State R.V.K. schools Sri Maheswaraiah, had an open discussion with the teachers.
Day 2: Subject heads took sessions for respective language teachers and subject teachers. Subject Heads conducted sessions on Competency Based Learning including Yojana Baithak, Question Paper Format, Question Paper Blueprint.

ಬೆಂಗಳೂರು, ಅಕ್ಟೋಬರ್ 14-15: ಜಯಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ರಾಮಮೂರ್ತಿನಗರದಲ್ಲಿ ಎರಡು ದಿನಗಳ ಕಾಲ ‘ಶಿಕ್ಷಕರ ಸಾಮರ್ಥ್ಯ ಸಂವರ್ಧನಾ ಶಿಬಿರ’ ಯಶಸ್ವಿಯಾಗಿ ನಡೆಯಿತು.
ಮೊದಲ‌ದಿನ: ರಾಷ್ಟ್ರೋತ್ಥಾನದ ‘ಸಾಧನಾ’ ಯೋಜನೆಯ ಶ್ರೀಮತಿ ಬೇಬಿ ರಾನಿಕರ್ ಅವರು ಸಮೂಹ ಕಲಿಕೆಯ ಮಹತ್ತ್ವದ ಕುರಿತು ಚಟುವಟಿಕೆಯುಕ್ತವಾಗಿ ತಿಳಿಸಿಕೊಟ್ಟರು. ಬಳಿಕ ಶ್ರೀ ರಾಘವೇಂದ್ರ ಪಾಟೀಲ್ ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ಮಾತನಾಡಿದರು. ಹಾಗೆಯೇ ರಾಷ್ಟ್ರ ಪುರುಷ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜೀವನ ಸಾಧನೆಗಳ ಕುರಿತು ಚಿಂತಕ, ಬರಹಗಾರರಾದ ಶ್ರೀ ಶ್ರೇಯಾಂಕ ರಾನಡೆ ಅವರು ಬೆಳಕು ಚೆಲ್ಲಿದರು. ಬಳಿಕ ಶಾಲೆಯ ವಿವಿಧ ಗುಂಪುಗಳಿಗೆ ಪ್ರಧಾನಾಚಾರ್ಯರಾದ ಶ್ರೀ‌ಮತಿ ಗೌರಿ ಸೆಂಥಿಲ್ ಅವರು ಹಾಗೂ ಉಪಪ್ರಧಾನಾಚಾರ್ಯರಾದ ಶ್ರೀಮತಿ ಆನೆಟ್ ಅವರು ಹಾಗೂ ಶ್ರೀ ಕಾರ್ತಿಕ್ ಕೃಷ್ಣನ್ ಅವರು ವೃತ್ತಿಪರತೆಯ, ರಾಷ್ಟ್ರೋತ್ಥಾನ ಸಂಸ್ಕೃತಿಯ ಕುರಿತು ತಿಳಿಸಿಕೊಟ್ಟರು. ದಿನದ ಅಂತಿಮ ಅವಧಿಯಲ್ಲಿ ರಾಜ್ಯ ಆರ್.ವಿ.ಕೆ. ಶಾಲೆಗಳ ಪ್ರಮುಖರಾದ ಶ್ರೀ ಮಹೇಶ್ವರಯ್ಯ ಅವರು ಶಿಕ್ಷಕರೊಂದಿಗೆ ಮುಕ್ತ ಸಂವಾದ ನಡೆದರು.
ಎರಡನೆಯ ದಿನ: ಆಯಾ ಭಾಷಾ ಶಿಕ್ಷಕರು ಮತ್ತು ವಿಷಯ ಶಿಕ್ಷಕರಿಗೆ ವಿಷಯ ಮುಖ್ಯಸ್ಥರು ಅವಧಿಗಳನ್ನು ತೆಗೆದುಕೊಂಡರು. ಯೋಜನಾ ಬೈಠಕ್, ಪ್ರಶ್ನೆ ಪತ್ರಿಕೆಯ ಸ್ವರೂಪ, ಪ್ರಶ್ನೆ ಪತ್ರಿಕೆಯ ನೀಲನಕ್ಷೆ ಸೇರಿದಂತೆ ಸಾಮರ್ಥ್ಯ ಆಧಾರಿತ ಕಲಿಕೆಯ ಕುರಿತು ವಿಷಯ ಮುಖ್ಯಸ್ಥರು ಅವಧಿಗಳನ್ನು ನಡೆಸಿಕೊಟ್ಟರು.

Scroll to Top