“The responsibilities of a teacher should extend beyond merely instructing students in literacy; they should also focus on preparing young minds to address the needs of the nation, uphold religious values, and tackle contemporary challenges” – Sri Srinivasa S, Chancellor, Nripatunga University – Teacher’s Day Celebration, JGRVK – Ramamurthy Nagar.
Bengaluru, Sept 5: Teacher’s Day was celebrated herein Jaigopal Garodia Rashtrotthana Vidya Kendra – Ramamurthy Nagar. Sri Srinivasa S, Chancellor of Nripatunga University graced the program. Students engaged in dance, performed group songs, and honoured the Guruvrinda. During this event, the attendees reflected on notable figures such as Chanakya, who contributed to nation-building, Vidyaranya, instrumental in founding the Vijayanagara Empire, Shivaji, who exemplified Kshatra Teja, Swami Vivekananda, who motivated the youth to liberate the nation from oppression, and Sri Ramakrishna Paramahamsa, who served as an inspiration, along with Ramananda.
“ಶಿಕ್ಷಕರ ಪಾತ್ರ ಕೇವಲ ಅಕ್ಷರ ಕಲಿಸುವುದಕ್ಕೆ ಮಾತ್ರ ಸೀಮಿತವಾಗದೇ ದೇಶ, ಧರ್ಮಕ್ಕಾಗಿ, ಆ ಕಾಲದ ಸಮಸ್ಯೆಗಳ ನಿವಾರಣೆಗೆ ಮನಸ್ಸುಗಳನ್ನು ಸಜ್ಜುಗೊಳಿಸುವ ಕೆಲಸವಾಗಬೇಕು” – ಶ್ರೀ ಶ್ರೀನಿವಾಸ ಎಸ್, ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಗಳು. – ಶಿಕ್ಷಕರ ದಿನಾಚರಣೆ, ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರ.
ಬೆಂಗಳೂರು, ಸಪ್ಟೆಂಬರ್ 5: ಜಯಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ -ರಾಮಮೂರ್ತಿ ನಗರದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ವಿಶೇಷ ಅತಿಥಿಗಳಾಗಿ ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀ ಶ್ರೀನಿವಾಸ ಎಸ್. ಅವರು ಆಗಮಿಸಿದ್ದರು.ವಿದ್ಯಾರ್ಥಿಗಳು ನೃತ್ಯ, ಸಮೂಹ ಗೀತೆಗಳನ್ನು ಹಾಡಿ ಗುರುವೃಂದಕ್ಕೆ ಅಭಿನಂದನೆ ಸಲ್ಲಿಸಿದರು. ಅತಿಥಿಗಳು ಈ ಸಂದರ್ಭದಲ್ಲಿ ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ಪಾತ್ರ ವಹಿಸಿದ ಚಾಣಕ್ಯ, ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು, ಕ್ಷಾತ್ರ ತೇಜ ಮೆರೆದ ಶಿವಾಜಿ, ದೇಶವನ್ನು ದಾಸ್ಯ ಮುಕ್ತಗೊಳಿಸಲು ಯುವಜನತೆಯನ್ನು ಪ್ರೇರೇಪಿಸಿದ ಸ್ವಾಮಿ ವಿವೇಕಾನಂದರು ಮತ್ತು ಅವರಿಗೆ ಸ್ಫೂರ್ತಿ ನೀಡಿದ ಶ್ರೀ ರಾಮಕೃಷ್ಣ ಪರಮಹಂಸರು, ಅಲ್ಲದೇ ರಮಾನಂದರು ಹೀಗೆ ಹತ್ತು ಹಲವು ಶ್ರೇಷ್ಠ ವ್ಯಕ್ತಿತ್ವಗಳನ್ನು ಸ್ಮರಿಸಿದರು.