Bengaluru, June 20: ‘Pratijna Vidhi’ and ‘Hindu Samrajya Utsav’ were celebrated herein Jaigopal Garodiya Rashtrotthana Vidya Kendra – Ramamurthry Nagar.Smt. Pushpanjali M. Kadyar, Head of NCC Girls Division, had arrived as the Chief Guest.The Chief Guest preached the oath to the selectees. Patha Snchalana was conducted by four teams and Puspanamana was paid to Shivji’s portrait. Students explained the significance of Shivaji’s coronation day. On the same occasion, they exhibited guerilla warfare and choreography on Shivaji’s bravery and Kshatrateja.
ಬೆಂಗಳೂರು, ಜೂನ್ 20 : ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಪ್ರತಿಜ್ಞಾ ವಿಧಿ ಹಾಗೂ ಹಿಂದೂ ಸಾಮ್ರಾಜ್ಯ ಉತ್ಸವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಪುಷ್ಪಾಂಜಲಿ ಎಂ.ಕಾಡ್ಯಾರ್, ಮುಖ್ಯಸ್ಥರು, ಎನ್.ಸಿ.ಸಿ. ಬಾಲಕಿಯರ ವಿಭಾಗ, ಆಗಮಿಸಿದ್ದರು. ಆಯ್ಕೆಗೊಂಡವರಿಗೆ ಮುಖ್ಯಅತಿಥಿಗಳು ಪ್ರತಿಜ್ಞಾವಿಧಿ ಬೋಧಿಸಿದರು. ನಾಲ್ಕೂ ತಂಡಗಳಿಂದ ಪಥಸಂಚಲನ ನಡೆಯಿತು. ಶಿವಾಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಶಿವಾಜಿಯವರ ಪಟ್ಟಾಭಿಷೇಕ ದಿನದ ಮಹತ್ತ್ವವನ್ನು ವಿದ್ಯಾರ್ಥಿಗಳು ತಿಳಿಸಿದರು.ಇದೇ ಸಂದರ್ಭದಲ್ಲಿ ಗೆರಿಲ್ಲಾ ಯುದ್ಧ ಮಾದರಿಯನ್ನು ಮತ್ತು ಶಿವಾಜಿಯ ಶೌರ್ಯ ಹಾಗೂ ಕ್ಷಾತ್ರತೇಜವನ್ನು ಕುರಿತಾಗಿ ನೃತ್ಯರೂಪಕವನ್ನು ಮಕ್ಕಳು ಪ್ರದರ್ಶಿಸಿದರು.