Bengaluru, Feb. 14: Teachers of Jaigopal Garodia Rashtrotthana Vidya Kendra – Ramamurthy Nagar attended a session on “Handling Unexpected Emergencies in Children” held at Manipal Hospital. During the session, doctors from various paediatric departments provided valuable insights on managing medical emergencies in schools and ensuring the safety of children. A practical workshop was conducted on Basic Life Support (BLS), splinting techniques and use of spacers and nebulizers. This practical workshop gave the teachers confidence to respond effectively in complex situations. From the session, the teachers gained a clear understanding of the dos and don’ts of emergency situations.

ಬೆಂಗಳೂರು, ಫೆ. 14: ಜೈಗೋಪಾಲ್‌ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದ ಶಿಕ್ಷಕರು ಮಣಿಪಾಲ ಆಸ್ಪತ್ರೆಯಲ್ಲಿ ನಡೆದ “ಮಕ್ಕಳಲ್ಲಿ ಅನಿರೀಕ್ಷಿತ ತುರ್ತುಸ್ಥಿತಿಗಳನ್ನು ನಿಭಾಯಿಸುವುದು” ಎಂಬ ವಿಷಯದ ಕುರಿತ ಅಧಿವಾಶನದಲ್ಲಿ ಭಾಗವಹಿಸಿದ್ದರು. ಅಧಿವೇಶನದಲ್ಲಿ ವಿವಿಧ ಮಕ್ಕಳ ವಿಭಾಗಗಳ ವೈದ್ಯರು ಶಾಲೆಗಳಲ್ಲಿ ವೈದ್ಯಕೀಯ ತುರ್ತುಸ್ಥಿತಿಗಳನ್ನು ನಿರ್ವಹಿಸುವುದು ಮತ್ತು ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸುವ ಕುರಿತು ಅಮೂಲ್ಯವಾದ ಒಳನೋಟಗಳನ್ನು ನೀಡಿದರು. ಮೂಲಭೂತ ಜೀವ ಬೆಂಬಲ (BLS), ಸ್ಪ್ಲಿಂಟಿಂಗ್ ತಂತ್ರಗಳು ಮತ್ತು ಸ್ಪೇಸರ್‌ಗಳು ಮತ್ತು ನೆಬ್ಯುಲೈಜರ್‌ಗಳ ಬಳಕೆಯ ಕುರಿತು ಪ್ರಾಯೋಗಿಕ ಕಾರ್ಯಾಗಾರವನ್ನು ನಡೆಸಲಾಯಿತು. ಈ ಪ್ರಾಯೋಗಿಕ ಕಾರ್ಯಾಗಾರವು ಶಿಕ್ಷಕರಿಗೆ ಸಂಕೀರ್ಣ ಸನ್ನಿವೇಶದಲ್ಲಿ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವಲ್ಲಿ ಆತ್ಮವಿಶ್ವಾಸ ಗಳಿಸಿಕೊಟ್ಟಿತು. ಅಧಿವೇಶನದಿಂದ ಶಿಕ್ಷಕರು ತುರ್ತು ಸಂದರ್ಭಗಳಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಪಡೆದರು.