Gurupurnima in JGRVK – Ramamurthy Nagar

Akhanda Mandalakaram Vyaptam Yena Characharam |
Tatpadam darshitam yena tasmai Sri Guruve Namah ||
Greetings to the revered Guru, who is present throughout the entire universe, who dwells in all living beings, and who imparts the significance of the word ‘Tat’. Bengaluru, July 22 : Gurupurnima was celebrated with fervent devotion herein Jaigopal Garodia Rashtrotthana Vidya Kendra – Ramamurthy Nagar. Sri Yogesh Bangera graced the program. The event commenced with the lighting of a lamp, followed by Agnihotra and Prayers. Pradhanacharya and Upapradhanacharya then respectfully placed flowers on the portrait of Guru Vedavyasa. The students talked about the significance of Gurupurnima and conveyed the significance of the festival through a dance performance. They paid homage to their guru by Padapuja and seeking his blessings.Sri Yogesh, the guest, told the children about the significance of Gurupurnima and the importance of Guru in our lives.

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್|
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||
ಅಖಂಡ ಮಂಡಲಾಕಾರದಲ್ಲಿ ವ್ಯಾಪವಾಗಿರುವವನನ್ನು, ಚರಾಚರಗಳಲ್ಲಿ ನೆಲೆಸಿರುವವನನ್ನು, ‘ತತ್’ ಪದದ ಅರ್ಥವನ್ನು ತಿಳಿಸುವವನೂ ಆದ ಗುರುವಿಗೆ ನಮಸ್ಕಾರವು.ಬೆಂಗಳೂರು, ಜುಲೈ 22: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಗುರುಪೂರ್ಣಿಮೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. ಶ್ರೀ ಯೋಗೇಶ್ ಬಂಗೇರಾ ಅವರು ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ, ಅಗ್ನಿಹೋತ್ರ ಮತ್ತು ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಗುರು ವೇದವ್ಯಾಸರ ಭಾವಚಿತ್ರಕ್ಕೆ ಪ್ರಧಾನಾಚಾರ್ಯರು ಹಾಗೂ ಉಪಪ್ರಧಾನಾಚಾರ್ಯರು ಪುಷ್ಪಾರ್ಚನೆ ಮಾಡಿದರು. ಗುರುಪೂರ್ಣಿಮೆಯ ಮಹತ್ತ್ವದ ಕುರಿತು ವಿದ್ಯಾರ್ಥಿಗಳು ಮಾತನಾಡಿದರು ಹಾಗೂ ನೃತ್ಯದ ಮೂಲಕ ಗುರುಪೂರ್ಣಿಮೆಯ ಉತ್ಸವದ ಮಹತ್ತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಗುರುಗಳ ಪಾದಪೂಜೆ ಮಾಡಿ ಆಶೀರ್ವಾದ ವನ್ನು ಪಡೆದರು. ಅತಿಥಿಗಳಾದ ಶ್ರೀ ಯೋಗೇಶ್ ಅವರು ಗುರುಪೂರ್ಣಿಮೆಯ ಮಹತ್ತ್ವ ಹಾಗೂ ನಮ್ಮ ಜೀವನದಲ್ಲಿ ಗುರುವಿನ ಮಹತ್ತ್ವದ ಕುರಿತು ಮಕ್ಕಳಿಗೆ ತಿಳಿಸಿದರು.

Scroll to Top