Bengaluru, Nov. 1: Karnataka Rajyotsava was celebrated at Jaigopal Garodia Rashtrotthana Vidya Kendra – Ramamurthy Nagar.
Dr. Satyamangala Mahadeva (a litterateur and Head of the Kannada Department at Seshadripuram Evening Degree College, Bengaluru) attended as the Chief Guest.
- The event commenced with the hoisting of the national flag and the state flag.
- Nihal P. Gautam, a student of Class 10, presented a book review.
- Students showcased cultural performances, including group dances, group songs, folk songs, skits, and Kolata (a traditional stick dance).
- In his address, the Chief Guest praised the school’s culture and spoke engagingly about Kannada folk traditions, the unification of the state, the vastness of the land, and the immense power of the Kannada language.
- On this occasion, the valedictory ceremony for ‘Kannada Saptaha’ (Kannada Week), which was observed over seven days from October 26th to November 1st, was also held.
- As part of ‘Kannada Week’ (Kannada Saptaha), a variety of events were organised, including storytelling, the presentation of riddles, the singing of folk songs, dance dramas, panel discussions, group dances, and quiz competitions.
- Additionally, proverbs and riddles corresponding to each letter of the Kannada alphabet were presented. Students shared information about Yakshagana and highlighted the significance of the Kannada land and language. Through the performance of Yakshagana dance and the singing of keerthanas (devotional songs) by Purandara Dasa, they showcased the rich cultural heritage of Kannada.
ಬೆಂಗಳೂರು, ನ. 1: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಾ. ಸತ್ಯಮಂಗಲ ಮಹಾದೇವ (ಸಾಹಿತಿಗಳು ಹಾಗೂ ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು) ಆಗಮಿಸಿದ್ದರು.
- ರಾಷ್ಟ್ರಧ್ವಜ ಹಾಗೂ ನಾಡಧ್ವಜಾರೋಹಣದ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು.
- 10ನೇ ತರಗತಿಯ ನಿಹಾಲ್ ಪಿ. ಗೌತಮ್ ಪುಸ್ತಕ ಪರಿಚಯ ಮಾಡಿಕೊಟ್ಟರು.
- ವಿದ್ಯಾರ್ಥಿಗಳು ಸಮೂಹ ನೃತ್ಯ, ಸಮೂಹ ಗೀತೆ, ಜಾನಪದ ಗೀತೆ, ಅಭಿನಯ ಹಾಗೂ ಕೋಲಾಟದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
- ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ಶಾಲೆಯ ಸಂಸ್ಕೃತಿಯನ್ನು ಶ್ಲಾಘಿಸುತ್ತಾ ಕನ್ನಡ ಜನಪದ ಸಂಸ್ಕೃತಿ, ಏಕೀಕರಣ, ನಾಡಿನ ವಿಸ್ತಾರ ಹಾಗೂ ಕನ್ನಡ ಭಾಷೆಯ ಅಗಾಧ ಶಕ್ತಿಯನ್ನು ಕುರಿತು ಸ್ವಾರಸ್ಯಕರವಾಗಿ ಮಾತನಾಡಿದರು.
- ಇದೇ ಸಂದರ್ಭದಲ್ಲಿ, 26ನೇ ಅಕ್ಟೋಬರ್ನಿಂದ 1ನೇ ನವೆಂಬರ್ 2026ರವರೆಗೆ ಏಳು ದಿನಗಳ ಕಾಲ ಆಚರಿಸಲಾದ ಕನ್ನಡ ಸಪ್ತಾಹದ ಸಮಾರೋಪ ಸಮಾರಂಭವೂ ನಡೆಯಿತು.
- ಕನ್ನಡ ಸಪ್ತಾಹದ ಅಂಗವಾಗಿ ಕಥೆ ಹೇಳುವಿಕೆ, ಒಗಟುಗಳ ಪ್ರಸ್ತುತಿ, ಜಾನಪದ ಗೀತೆಗಳ ಗಾಯನ, ನೃತ್ಯ ರೂಪಕ, ಚರ್ಚಾಗೋಷ್ಠಿ, ವರ್ಣಮಾಲೆಯ ಪ್ರತಿಯೊಂದು ಅಕ್ಷರಕ್ಕೂ ಒಂದೊಂದು ಗಾದೆ ಹಾಗೂ ಒಗಟುಗಳ ಪ್ರಸ್ತುತಿ, ಸಮೂಹ ನೃತ್ಯ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಯಕ್ಷಗಾನದ ಕುರಿತು ಮಾಹಿತಿ ಹಂಚಿಕೊಂಡು, ಕನ್ನಡ ನಾಡು-ನುಡಿಯ ಮಹತ್ವವನ್ನು ತಿಳಿಸಿದರು. ಯಕ್ಷಗಾನ ನೃತ್ಯವನ್ನು ಪ್ರದರ್ಶಿಸುವುದರ ಜೊತೆಗೆ ಪುರಂದರ ದಾಸರ ಕೀರ್ತನೆಗಳನ್ನು ಹಾಡಿ ಕನ್ನಡದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿದರು.












